ಬೆಂಗಳೂರು: 65 ಕೆಜಿಗೂ ಅಧಿಕ ಗಾಂಜಾ ವಶ, ಇಬ್ಬರು ಪೆಡ್ಲರ್ ಗಳ ಬಂಧನ ಚಲಿಸುವ ರೈಲುಗಳ ಮೇಲೆ ಕಳೆದ ಐದು ದಿನಗಳಲ್ಲಿ ದಾಳಿ ನಡೆಸಿದ ಸರ್ಕಾರಿ ರೈಲ್ವೆ ಪೊಲೀಸರು 65.47 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಬೆಂಗಳೂರು: ಚಲಿಸುವ ರೈಲುಗಳ ಮೇಲೆ ಕಳೆದ ಐದು ದಿನಗಳಲ್ಲಿ ದಾಳಿ ನಡೆಸಿದ ಸರ್ಕಾರಿ ರೈಲ್ವೆ ಪೊಲೀಸರು 65.47 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.65,47,900 ರೂ. ಮೌಲ್ಯದ ಗಾಂಜಾ ವಶಪಡಿಸಿಕೊಂಡು ಇಬ್ಬರು ಪೆಡ್ಲರ್‌ಗಳನ್ನು ಬಂಧಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಜೂನ್ 13 ರಿಂದ 18 ರವರೆಗೆ ಜಿಆರ್‌ಪಿಯ ವಿಶೇಷ ಪಡೆ ದಾಳಿ ನಡೆಸಿತು. ದಾಳಿಯ ವೇಳೆ ಅಕ್ರಮವಾಗಿ ಗಾಂಜಾ ಸಾಗಾಟಕ್ಕೆ ಸಂಬಂಧಿಸಿದಂತೆ ಒಟ್ಟು ನಾಲ್ಕು ಪ್ರಕರಣಗಳನ್ನು ದಾಖಲಿಸಿದೆ.ಜಿಆರ್‌ಪಿ ಡೆಪ್ಯುಟಿ ಎಸ್ಪಿ, ಬೆಂಗಳೂರು, ರವಿಕುಮಾರ್, ಸರ್ಕಲ್ ಇನ್ಸ್‌ಪೆಕ್ಟರ್ ಬೆಂಗಳೂರು ಎಂಎನ್ ರವಿಶಂಕರ್ ಮತ್ತು ಸಬ್ ಇನ್‌ಸ್ಪೆಕ್ಟರ್‌ಗಳಾದ ವಸಂತಕುಮಾರ್ ಮತ್ತು ಸತ್ಯಪ್ಪ ಗಾಂಜಾ ವಶಪಡಿಸಿಕೊಳ್ಳುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ.